ಉಡ್ಡೀಶ ತಂತ್ರ / Uddisha tantra
₹400.00
ಸ್ವಾಮಿ ಶ್ರೀಧರಾನಂದ
ಉದ್ದೇಶ ತಂತ್ರವು ಸ್ವತಃ ರಾವಣನು ಶಿವನ ವಾಣಿಯಿಂದ ಕೇಳಿದ್ದನ್ನೇ ವಿವರಿಸುವ ಕೃತಿ. ಅವನು ಅಖಂಡ, ಪಂಡಿತ, ಅಭೇದ್ಯ ಜ್ಞಾನಿ, ಶಾಸ್ತ್ರಜ್ಞ, ತಂತ್ರಜ್ಞ, ಶಿವ-ಪಾರ್ವತಿಯರ ಪರಮ ಭಕ್ತ.
ಶಿವ-ಶಕ್ತಿಯರ ಸಮ್ಮುಖದಲ್ಲಿ ತಂತ್ರಜ್ಞಾನ ಮತ್ತು ಅರ್ಕಜ್ಞಾನ (ವನಸ್ಪತಿ ಶಾಸ್ತ್ರ)ವನ್ನು ಪಡೆದನೆಂದು ಪ್ರಾಚೀನ ಗ್ರಂಥಗಳಲ್ಲಿ ಓದಬಹುದು. ಅವನಂತಹ ಶೂರ-ವೀರ ತ್ರೇತಾಯುಗದಲ್ಲಿದ್ದಿಲ್ಲ. ಆಗ ಪ್ರಚಲಿತವಾಗಿದ್ದ ಸಂಸ್ಕೃತ ಭಾಷೆಯಲ್ಲಿ ಯಂತ್ರ-ಮಂತ್ರ-ತಂತ್ರ ಜ್ಞಾನಗಳ ಜೊತೆಗೆ ಆಯುರಾರೋಗ್ಯದ ಮತ್ತು ಗ್ರಹ ನಕ್ಷತ್ರಗಳ ಪ್ರಭಾವದಲ್ಲಿರುವ ಜೀವನಚಕ್ರದ ಸಂಪೂರ್ಣ ವಿವರವನ್ನು ಬಹಳ ಸರಳವಾಗಿ ವಿವರಿಸಿದ. ಉಡ್ಡಿಶ ತಂತ್ರವನ್ನು ರಾಮೋಡೀಶ ತಂತ್ರವೆಂದೂ, ಕ್ರಿಯೋಡೀಶ ತಂತ್ರವೆಂದೂ ಕರೆಯುವ ವಾಡಿಕೆಯುಂಟು.
ಶಿವ-ಪಾರ್ವತಿಯರ ಮುಖಾರವಿಂದದಿಂದ ಪ್ರಕಟವಾದ ಉಡ್ಡಿಶತಂತ್ರದ ಸಂಪೂರ್ಣ ಜ್ಞಾನವು ಸಕಲರಿಗೂ ದೊರೆಯಲೆಂಬ ಮಹಾಕಾಂಕ್ಷೆಯಿಂದ ಜ್ಞಾನ ಗಂಗೆಯಾಗಿರುವ ತಂತ್ರವನ್ನು ಹಲವು ಅಧ್ಯಾಯಗಳ ಮೂಲಕ ವಿವರಿಸುವ ಪ್ರಯತ್ನವನ್ನು ಮಾಡಲಾಗಿದ್ದು ಪ್ರತಿಯೊಂದು ಅಧ್ಯಾಯವೂ ತನ್ನದೇ ಆದ ವಿಶೇಷತೆಯ ಗೂಢ ಜ್ಞಾನವನ್ನು ಪ್ರಕಟಿಸುತ್ತದೆ.
Quantity
ಲೇಖಕರು
ಸ್ವಾಮಿ ಶ್ರೀಧರಾನಂದ
ಪ್ರಕಾಶನ
ಶ್ರೀನಿಧಿ ಪಬ್ಲಿಕೇಷನ್ಸ್

















