ತಂತ್ರ ಸಾಧನ ರಹಸ್ಯ / Tantra saadhana rahasya
₹300.00
ಶ್ರೀ ಶಿವ ಸ್ವರೂಪ ಚೈತನ್ಯ
ತಾಂತ್ರಿಕ ಸಂಪ್ರದಾಯ-ಪರಂಪರೆಯ ಸಕಲ `ರಹಸ್ಯ ವಿದ್ಯೆಗಳನ್ನು ಗುರು ಶಿಷ್ಯರಿಗೆ ಉಪದೇಶಿಸುವಂತಿರುವ ಈ ಗ್ರಂಥ ರತ್ನವು 16ನೇ ಶತಮಾನದ ಉತ್ತರಾರ್ಧದಲ್ಲಿ ರಚಿತವಾಗಿದೆ ಎಂದು ತಿಳಿದುಬರುತ್ತದೆ.
ಕಾಲದ ಪ್ರಭಾವದಿಂದ ಮಾನವ ಪ್ರತಿಭೆ- ಸಾಮರ್ಥ್ಯಗಳು ಹ್ರಾಸವಾಗುತ್ತಿದ್ದಂತೆಯೇ ಗುರುಪರಂಪರೆಯಿಂದ ಪ್ರಾಪ್ತ ಸಾಧನೆಯ ಸೂಕ್ಷ್ಮ ಸೂತ್ರಗಳು ಮರೆಯಾಗದಂತೆ ರಕ್ಷಿಸಲು ಈ ದಿವ್ಯ-ಶ್ರೇಷ್ಟ ಜ್ಞಾನವನ್ನು ಲಿಪಿ ಬದ್ಧಗೊಳಿಸಲಾಯಿತು.
'ಶಾಕ್ತಾನಂದ ತರಂಗಿಣಿ'-ಎಂಬ ಮೂಲ ಹೆಸರಿನಲ್ಲಿ ರಚಿಸಲಾದ ಈ ಅನುಪಮ ಗ್ರಂಥದಲ್ಲಿ ಗರ್ಭಾವಸ್ಥೆಯಿಂದ ಪುನರ್ಜನ್ಮ ದವರೆಗೆ ಮಾನವ ಜೀವನದ ವ್ಯವಸ್ಥೆಯ ಸಾದ್ಯಂತ ನಿರೂಪಣೆಯನ್ನು ಮಾಡಲಾಗಿದೆ.
ಜಗನ್ಮಾತೆಯ ಆರಾಧನೆಯ ಸೂಕ್ಷ್ಮ ಸೂತ್ರಗಳು ಮತ್ತು ಹಲವು ಹಂತಗಳ ಸಾಧನಾ ರಹಸ್ಯಗಳು, ಹೀಗೆ... ಹಲವಾರು ಗೌಪ್ಯ ಮಾಹಿತಿಗಳನ್ನು ವಿವರಿಸಲಾಗಿದೆ.
100 ತಾಂತ್ರಿಕ ಗ್ರಂಥಗಳ ಮೂಲ ತಿರುಳೇ ಶಾಕ್ತಾನಂದ ತರಂಗಿಣಿ ಎಂಬ ತಂತ್ರ ಸಾಧನಾ ರಹಸ್ಯ ಎಂದು ದಾರ್ಶನಿಕರು ಈ ಗ್ರಂಥದ ಮಹಿಮೆಯನ್ನು ಕೊಂಡಾಡಿದ್ದಾರೆ.
Quantity
Only 3 left in stock
ಲೇಖಕರು
ಶ್ರೀ ಶಿವ ಸ್ವರೂಪ ಚೈತನ್ಯ
ಪ್ರಕಾಶನ
ಶ್ರೀನಿಧಿ ಪಬ್ಲಿಕೇಷನ್ಸ್
ಪುಟಗಳು
320

















