top of page

ನವೀನ ರೀತಿಯ ವಧು-ವರರ ಜಾತಕ ಹೊಂದಾಣಿಕೆಗಳು / Naveena Rithiya Jataka Hondaanikegalu

Price

₹100.00

ವಿವಾಹವಾಗಬಯಸುವ ವಧು ಅಥವಾ ವರ ಸಂಗಾತಿಯ ಜೊತೆ ಜೀವನಪೂರ್ತಿ ಸುಖ-ಸಂತೋಷದಿಂದ ಬದುಕಬೇಕೆಂದು ಬಯಸುವುದು ಸಹಜ. ಆದರೆ ನಮ್ಮ ಜನ್ಮಾಂತರ ಕರ್ಮಫಲ ಹಾಗೂ ಕರ್ಮಾನುಸಾರವಾಗಿ ಪತಿ/ಪತ್ನಿಯನ್ನು ಪಡೆಯುತ್ತೆವೆ. 

ವಿವಾಹಕ್ಕೂ ಮೊದಲು ಅವರ ಗುಣ, ಸ್ವಭಾವ, ನಡತೆ, ಧನ, ರೂಪ, ಉತ್ತಮ ಆರೋಗ್ಯವಿದ್ದರೂ ಸಹ ವಿವಾಹವಾದ ಮೇಲೆ ಕರ್ಮಾನುಸಾರ ಪತಿ/ಪತ್ನಿಯಲ್ಲಿ ವ್ಯತ್ಯಾಸವಾಗುತ್ತದೆ. ವಿವಾಹವಾದ ಮೇಲೆ ನಮ್ಮ ಅರ್ಧ ಶುಭ/ಅಶುಭ ಯೋಗಗಳು ಅವರಿಗೂ… ಅವರ ಅರ್ಧ ಶುಭ/ಅಶುಭಯೋಗಗಳು ನಮಗೂ ಬಂದು ಸೇರುತ್ತವೇ. 

ಅಂದರೆ ಧನ, ದಾರಿದ್ರ್ಯತೆ, ಧಾರ್ಮಿಕತೆ, ಆಧ್ಯಾತ್ಮಿಕವಲ್ಲದೆ ಇತರ ಎಲ್ಲ ಗುಣಗಳು ಸೇರುತ್ತವೆ. ಆದರೆ, ಪತಿ ಅಥವಾ ಪತ್ನಿಯ ಸಂಸ್ಕಾರ, ನಡತೆಯಂತೆ ಮತ್ತು ಅವರ ಮಾತಾ-ಪಿತೃಗಳ ಪಾಪಪುಣ್ಯಗಳಂತೆ ಶುಭ/ಅಶುಭಫಲಗಳನ್ನು ಪಡೆಯುವಂತೆ ಮಾಡುತ್ತದೆ. 

ವಿವಾಹಕ್ಕೂ ಮೊದಲು ದೇವರನ್ನೇ ನಂಬದೆ ದೇವಾಲಯಕ್ಕೆ ಹೋಗದವರು,ವಿವಾಹವಾದ ನಂತರ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಲು ಆರಂಭಿಸುತ್ತಾರೆ. ಅದೇ ರೀತಿ ವಿವಾಹಕ್ಕೆ ಮೊದಲು ಕುಡಿಯದಿದ್ದವರು ವಿವಾಹವಾದ ನಂತರ ಕುಡುಕರು, ಜೂಜುಕೋರರಾಗಿರುವುದನ್ನೂ ನೋಡುತ್ತೇವೆ. 

 

ಆದ್ದರಿಂದ ನಮ್ಮ ಜೀವನದಲ್ಲಿ ಪತ್ನಿಯ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಅವರ ಗ್ರಹಗತಿಗಳಂತೆ ನಾವು; ನಮ್ಮ ಗ್ರಹಗತಿಗಳಂತೆ ಅವರು ಫಲಾಫಲಗಳನ್ನು ಅನುಭವಿಸುವರು. 

 

ಈ ಗ್ರಂಥದಲ್ಲಿ - ನವೀನ ರೀತಿಯ ವಧು-ವರರ ಜಾತಕ ಹೊಂದಾಣಿಕೆ, ವಧು-ವರರ ಜಾತಕ ಪರಿಶೀಲನೆ, ನಪುಂಸಕಯೋಗ, ಶಯನಸುಖ ಹಾಗೂ ಸನ್ಯಾಸಯೋಗ, ಉತ್ತಮ ಸಂಪ್ರದಾಯ ಪಾಲನೆ, ಧನಯೋಗ ಮತ್ತು ದಾರಿದ್ಯ್ರಯೋಗ, ಆಧ್ಯಾತ್ಮಿಕ ಚಿಂತನೆಯಿಂದ ಪರಿಹಾರಗಳ ಬಗ್ಗೆಯೂ ಸಹ ವಿವರಿಸಲಾಗಿದೆ.

 

Quantity

ಲೇಖಕರು

ಎಂ. ವಾಸುದೇವಮೂರ್ತಿ 

ಪ್ರಕಾಶನ

ಸಪ್ತಗಿರಿ ಪ್ರಕಾಶನ 

ಪುಟಗಳು

112

No Reviews YetShare your thoughts. Be the first to leave a review.

You Might also Like

bottom of page