top of page

ಶಾಂತಿ ಸೌರಭಃ / Shaanti Sourabha

Price

₹600.00

ಶ್ರೀ ಕೆ . ಪಿ .  ಶಂಕರ ಸೋಮಯಾಜಿ 

 

ಪಂಡಿತ, ಶಿರೋಮಣಿ ವಿದ್ವಾನ್, ಸಾಹಿತ್ಯ ರತ್ನ, ಎಂ.ಎ. ಕೀರ್ತಿಶೇಷ ಕೆ. ಪಿ. ಶಂಕರ ಸೋಮಯಾಜಿಯವರ

 

ಶಾಂತಿ ಸೌರಭಃ

 

ಪೂರ್ವಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಬಾಧತೇ।
ತತ್ಕಾಂತಿರೌಷಧೈರ್ದಾನೈ: ಜಪ ಹೋಮ ಸುರಾರ್ಚನೈ: ||

 

 

ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ನಮಗೆ ವ್ಯಾಧಿಗಳಾಗಿ ಬಾಧಿಸುತ್ತವೆ. ಅದು ಪರಿಹಾರವಾಗಬೇಕಾದರೆ ಶಾಂತಿಗಳಿಂದ, ಔಷಧೋಪಚಾರಗಳಿಂದ, ದಾನಧರ್ಮದಿಂದ, ಜಪಗಳಿಂದ ಹೋಮಗಳಿಂದ, ದೇವತಾ ಅರ್ಚನೆಗಳಿಂದ ಸಾಧ್ಯ ಎಂದು ಹಿರಿಯರು ಹೇಳಿರುತ್ತಾರೆ. ಅಂತೆಯೇ ಹಲವು ಶಾಂತಿಗಳು ಇದ್ದರೂ, ಕೆಲವು ಶಾಂತಿಗಳು ಪ್ರಚಲಿತದಲ್ಲಿದ್ದರೂ, ಇನ್ನು ಕೆಲವು ಶಾಂತಿಗಳು ನಾನಾಕಾರಣಗಳಿಂದ ಕಣ್ಮರೆಯಾಗಿವೆ. ಅವುಗಳಲ್ಲಿ ಕೆಲವು ಶಾಂತಿ ಪ್ರಯೋಗಗಳನ್ನು ವಿದ್ವಾನ್ ಶಂಕರ ಸೋಮಯಾಜಿಗಳು ತಮ್ಮ ಹಸ್ತಪ್ರತಿಗಳಲ್ಲಿ ಸಂಗ್ರಹಿಸಿ ಹಲವು ಜನರಿಗೆ ಉಪಯೋಗ ಆಗುವಂತೆ ಮಾಡಿದ್ದಾರೆ. ಅವರ ಸಂಗ್ರಹ ಸಾಧನೆ ಅಪಾರ. ಅವರ ಹಲವು ಸಂಗ್ರಹಗಳಲ್ಲಿ ಶಾಂತಿ ಸೌರಭಃ ಗ್ರಂಥವೂ ಒಂದು. ಇದರಲ್ಲಿ ಅಪರೂಪದ ಶಾಂತಿ ಪ್ರಯೋಗಗಳನ್ನು ಸೋಮಯಾಜಿಗಳು ಸಂಗ್ರಹ ಮಾಡಿದ್ದಾರೆ. ಅವರ ಈ ಸಂಗ್ರಹವು ಇಂದಿನ ಯುವ ಪೀಳಿಗೆಗೆ ಅಪಾರವಾದ ಕೊಡುಗೆಯಾಗಿದೆ. ಕೈಬರಹದ ಪುಸ್ತಕವನ್ನು ಈಗಿನ ಕಾಲಕ್ಕೆ ಅನುಕೂಲವಾಗಲೆಂದು ಸುಂದರವಾಗಿ ಮುದ್ರಣ ಮಾಡಲಾಗಿದೆ. ಇದರ ಸದುಪಯೋಗವಾದಲ್ಲಿ ಸೋಮಯಾಜಿಗಳ ಪರಿಶ್ರಮಕ್ಕೆ ಸಾರ್ಥಕತೆ ಸಿಕ್ಕಂತೆ ಅಗುತ್ತದೆ. ಈ ಗ್ರಂಥದ ಸದುಪಯೋಗ ಎಲ್ಲರಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ಹೊರ ತರಲಾಗಿದೆ.

ಗ್ರಂಥ ಬೇಕಾದವರು ಈ ಕೆಳಗಿನ ಸಂಖ್ಯೆಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ.

 

 

Whatsapp Channel

Quantity

ಲೇಖಕರು

ಶ್ರೀ ಕೆ . ಪಿ .  ಶಂಕರ ಸೋಮಯಾಜಿ 

ಪ್ರಕಾಶನ

ಎಸ್ . ಆರ್ . ಗ್ರಾಫಿಕ್ಸ್ . 

ಪುಟಗಳು

512

No Reviews YetShare your thoughts. Be the first to leave a review.

You Might also Like

bottom of page