ಶ್ರೀ ರುದ್ರ ಹೋಮ ವಿಧಿಃ / Shree Rudra Homa Vidhi
₹550.00
ಶ್ರೀ ಕೆ . ಪಿ . ಶಂಕರ ಸೋಮಯಾಜಿ
ಸಾಹಿತ್ಯ ರತ್ನ ಪಂಡಿತ ಶಿರೋಮಣಿ ವಿದ್ವಾನ್ ಕೀರ್ತಿಶೇಷ. ಕೆ. ಪಿ. ಶಂಕರ ಸೋಮಯಾಜಿಯವರ ಆಗಮ ಶಾಸ್ತ್ರ ಪ್ರಯೋಗಜ್ಞರಿಗೆ ಅತಿ ಉಪಯುಕ್ತವಾದ, ಅನುಷ್ಠಾನ ಪದ್ಧತಿಯ ಪೂರ್ಣ ಗ್ರಂಥ
ಶ್ರೀ ರುದ್ರ ಹೋಮ ವಿಧಿಃ
रुद्र पद्धति
ಕರಾವಳಿಯ ಪಟ್ಟಿಯಲ್ಲಿ ರುದ್ರಾನುಷ್ಠಾನ ಆನಾದಿಯಿಂದಲೂ ನಡೆದು ಬಂದಿದೆ. ಸುವರ್ಣಾನದಿಯ ದಕ್ಷಿಣ ಭಾಗದಲ್ಲಿ ಬಹುಪಾಲು ದೇಗುಲಗಳೆಲ್ಲ ಶಿವಸಾನ್ನಿಧ್ಯದವುಗಳು, ಭೂತಾವೇಶ, ಪಾಡನ-ಕೋಲ ಮುಂತಾದವುಗಳೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದೂ ಅಲ್ಲಿಯೇ. ಉತ್ತರಕ್ಕೆ ಹೋದಂತೆ ಇವುಗಳೆಲ್ಲ ವಿರಳವಾಗುತ್ತಾ ಸಾಗುತ್ತವೆ. ಆದರೆ ಹೋಮ ಹವನಾದಿಗಳೊ ಯಜ್ಞಯಾಗಾದಿಗಳೋ ಪುಷ್ಕಳವಾಗಿ ನಡೆಯುತ್ತಿದ್ದ ಪ್ರದೇಶವಿದು, ಕೂಟ ಮಹಾಜಗತ್ತೆನಿಸಿ ಬಹುಸಂಖ್ಯಾತ ಬ್ರಾಹ್ಮಣ ಸಮೂಹ ನಿವಾಸ ಇಲ್ಲಿ ಹಿಂದಿನಿಂದಲೂ ಇತ್ತು. ಉಡುಪಿ ಅನಂತೇಶ್ವರ, ಅಜಪುರ ಮಹೇಶ್ವರ, ಕೋಟ ಹಿರೇಮಹಾಲಿಂಗೇಶ್ವರ, ಕೋಟೇಶ್ವರದ ಕೋಟೀಶ್ವರ - ಹೀಗೆ ಸಾಲುಸಾಲಾಗಿ ರುದ್ರ ಸಾನ್ನಿಧ್ಯದ ದೇಗುಲಗಳು ಇಲ್ಲಿ ರಾರಾಜಿಸುತ್ತಿವೆ. ರುದ್ರೆಕಾದಶಿನೀ, ಮಹಾರುದ್ರಯಾಗ, ಅತಿರುದ್ರಯಾಗಾದಿಗಳು ನಡೆಯುತ್ತಿರುವ ಸ್ಥಳವಿದು. ಅದಕ್ಕೆ ಯೋಗ್ಯ ವೈದಿಕ ಸಮೂಹವು ಇಲ್ಲಿ ಸಂಪನ್ನಗೊಂಡಿದೆ. ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ನಡೆಯುತ್ತಿದ್ದ ಕಕ್ಕುಂಜೆ ಮಹಾರುದ್ರಯಾಗ ಈಗಲೂ ಜನಜನಿತ. ಇಂತಹ ರುದ್ರಯಾಗದ ವಿಧಿವಿಧಾನಗಳನ್ನು ಏಕತ್ರ ಸಂಗ್ರಹಿಸಿದ ಶ್ರೀ ಶಿವಶಂಕರ ಸೋಮಯಾಜಿಗಳ ಪ್ರಯತ್ನವು ಗ್ರಂಥರೂಪವಾಗಿ ಪ್ರಕಟವಾಗುತ್ತಿರುವುದು ತುಂಬಾ ಸಂತೋಷದ ವಿಚಾರ.
ಗ್ರಂಥ ಸಂಗ್ರಾಹಕರು ವೈದಿಕ ಪರಂಪರೆಯ ಸೋಮಯಾಗ ಮಾಡಿದ ಮನೆತನದಲ್ಲಿ ಜನಿಸಿದವರು. ಇವರ ತಂದೆ ಪ್ರಸಿದ್ಧ ತಾಂತ್ರಿಕರೂ, ಜ್ಯೋತಿಷ ವಿದ್ವಾಂಸರೂ, ಸೋಮಯಾಗಾದಿಗಳನ್ನು ಮಾಡಿದವರೂ ಆದ ಶ್ರೀ ವೇ। ಪದ್ಮನಾಭ ಸೋಮಯಾಜಿಗಳು, ಇವರ ಹಿರಿಯ ಸುಪುತ್ರರಾಗಿ ಜನಿಸಿದ ಶ್ರೀ ಶಂಕರ ಸೋಮಯಾಜಿಗಳೂ ಲೌಕಿಕ-ದೈದಿಕ ವಿದ್ಯೆಯಲ್ಲಿ ಪಾರಂಗತರೆನಿಸಿ, ಆಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಮುದ್ದು ಮುದ್ದಾದ ಅಕ್ಷರಗಳಲ್ಲಿ ಇವರು ಬರೆದು ಸಂಗ್ರಹಿಸಿದ ಪುಸ್ತಕಗಳೆಷ್ಟೋ! "ವಿದ್ಯಾನೇನ ವಿಜಾನಾತಿ ವಿದ್ವಜ್ಜನಪರಿಶ್ರಮಮ್'' ಎಂಬಂತೆ ಅವರ ಲೇಖನ ಪರಿಶ್ರಮ ಅವರ್ಣನೀಯ. ಕ್ಷಣಕಾಲ ಸುಮ್ಮನೆ ಕೂರುವವರಾಗಿರಲಿಲ್ಲ. ಇವರು, ಎಲೆಯ ಮರೆಯ ಕಾಯಿಯಂತೆ ಇದ್ದ ಇವರ ಪರಿಶ್ರಮವನ್ನು ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಸ್ವಾಮಿಗಳು ಗುರುತಿಸಿ ಸಮ್ಮಾನಿಸಿದ್ದರು. ವೃದ್ಧಾಪ್ಯದಲ್ಲೂ ಬರಹ ಬಿಟ್ಟವರಲ್ಲ ಇವರು. . 'ಶ್ರೀ ರುದ್ರಹೋಮ 2: ಪರಿಶ್ರಮದ ಫಲಗಳಲ್ಲೊಂದು, ಊರ ಪರಿಸರದಲ್ಲಿ ರೂಢಿಯಲ್ಲಿದ್ದ ರುದ್ರಹೋಮ ವಿವರಣೆಯನ್ನು ಸಾಧಾರವಾಗಿ ಮತಭೇದಗಳನ್ನೂ ಬಿಡದೇ ಸಂಗ್ರಹಿಸಿ ಈ ಗ್ರಂಥವನ್ನು ರಚಿಸಿರುವರು. ಇದರಲ್ಲಿ ರುದ್ರ ಪೂಜಾ ವಿಧಿ, ಕಲಶಸ್ಥಾಪನೆ, ಮಾರ್ಜನೆ, ದಾನ, ದಕ್ಷಿಣಾದಿಗಳ ವಿವರಗಳನ್ನೊಳಗೊಂಡ ಹೋಮ ವಿಧಿ ಕ್ರಮವಾಗಿ ನಿರೂಪಿತವಾಗಿದೆ. ಶಕ್ತಾನುಸಾರ ರುದ್ರಹೋಮ ಕರ್ತೃಗಳಿಗೆ ಯೋಗ್ಯವಾದ ವಿಷಯ ವಿವರಣ ಇಲ್ಲಿದೆ. ಯಾಜುಷ ಪ್ರಯೋಗವೆಂದೆನಿಸಿದ ಈ ರುದ್ರಯಾಗವು ಪ್ರತಿಯೊಬ್ಬರಿಗೂ ಅನುಷ್ಟೇಯವಾಗಿದೆ. ಇದರಿಂದ 'ಉಪಕೃತರಾಗಿ ವೈದಿಕ ಪರಂಪರೆಯ ಶ್ರೇಯೋಭಾಗಿಗಳಾಗಲಿ, ಗ್ರಂಥಸಂಪಾದನೆಯ ಪರಿಶ್ರಮ ಸಾರ್ಥಕವಾಗಲೆಂದು ಆಶಿಸುವೆನು.
Quantity
Only 1 left in stock
ಲೇಖಕರು
ಶ್ರೀ ಕೆ . ಪಿ . ಶಂಕರ ಸೋಮಯಾಜಿ
ಪ್ರಕಾಶನ
ಅಸ್. ಆರ್. ಗ್ರಾಫಿಕ್ಸ್
ಪುಟಗಳು
480

















