ಹಸ್ತ ಸಾಮುದ್ರಿಕಾ / Hasta Samudrika
₹180.00
₹170.00
ಹಸ್ತ ಸಾಮುದ್ರಿಕಾ/Hasta Samudrika ಲೇಖಕರು- ಡಾ।। ಅನಸೂಯ ಎಸ್. ರಾಜೀವ್
ಹಸ್ತಸಾಮುದ್ರಿಕೆಯು ಸಮುದ್ರಋಷಿ ವಿರಚಿತ ಸಾಮುದ್ರಿಕಾ ಶಾಸ್ತ್ರದ ಒಂದು ಭಾಗ. ಹಸ್ತಸಾಮುದ್ರಿಕಾ ಶಾಸ್ತ್ರದ ಮೂಲ ಭಾರತವೇ ಆದರೂ ಪಾಶ್ಚಾತ್ಯರು ಈ ಶಾಸ್ತ್ರವನ್ನು ಬಳಸಿಕೊಂಡು ಅಲ್ಲಿನ ದೇಶ, ಕಾಲ, ವರ್ತಮಾನಗಳಿಗನುಗುಣವಾಗಿ ಕೆಲವೊಂದು ಬದಲಾವಣೆ ಮಾಡಿಕೊಂಡರು. ಪ್ರಸ್ತುತ ಭಾರತದ ಸ್ಥಿತಿಗತಿ ಪಾಶ್ಚಾತ್ಯರ ಸ್ಥಿತಿಗತಿಯಲ್ಲಿ ಸಾಮ್ಯತೆ ಇರುವುದರಿಂದ ಅವರು ‘ಕೀರೋ’ವಿನ ಹಸ್ತಸಾಮುದ್ರಿಕಾ ಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡೇ ಬರೆದಿರುತಾರೆ.
‘ಹಸ್ತಸಾಮುದ್ರಿಕಾ ಶಾಸ್ತ್ರ’ ಗ್ರಂಥದಲ್ಲಿ ‘ಹಸ್ತದ ಪರಿಚಯ’, ‘ಬೆರಳುಗಳ ಪರಿಚಯ’, ‘ಪ್ರಧಾನ ರೇಖೆಗಳು’, ‘ಉಪರೇಖೆಗಳು’, ‘ಹಸ್ತದಲ್ಲಿ ಯೋಗಗಳು’, ‘ಹಸ್ತದಲ್ಲಿ ದ್ವಾದಶ ಭಾವಗಳ ವಿಶ್ಲೇಷಣೆ’, ‘ಹಸ್ತದಲ್ಲಿ ಆರೋಗ್ಯ’, ‘ಹೆಬ್ಬೆರಳಿನಿಂದ ಜನ್ಮಲಗ್ನವನ್ನು ಕಂಡುಹಿಡಿಯುವ ಕ್ರಮ’ ಮತ್ತು ‘ಹಸ್ತಸಾಮುದ್ರಿಕೆಯಲ್ಲಿ ಪರಿಹಾರಗಳು’ ಹೀಗೆ ಹಲವು ವಿಷಯಗಳನ್ನು ವಿವರಿಸಲಾಗಿದೆ.
ಈ ಪುಸ್ತಕವು ಆರಂಭಿಕ ಹಂತದಲ್ಲಿ ಕಲಿಯುವವರಿಗೆ ಅನುಕೂಲವಾಗುವಂತಹ ಹೊತ್ತಿಗೆ. ಇದರಲ್ಲಿ ಲೇಖಕರು ಹಸ್ತದ ಬಗ್ಗೆ ಸಮಗ್ರ ಪರಿಚಯವನ್ನು ಮಾಡಿರುತ್ತಾರೆ. ಹಸ್ತ ಸಾಮುದ್ರಿಕಾಸಕ್ತರಿಗೆ ಈ ಗ್ರಂಥ ಉಪಯೋಗವಾಗುವುದರಲ್ಲಿ ಸಂಶಯವಿಲ್ಲ.
Quantity
ಲೇಖಕರು
ಡಾ|| ಅನಸೂಯ ಎಸ್. ರಾಜೀವ್

















