top of page

ಜ್ಯೋತಿಷ್ಯ ಸೌರಭ / Jyotishya Sourabha - Astrology Books




Astrology Book, Jyotishya Sourabha

ಪೀಠಿಕೆ


ಜಾತಕಗಳಲ್ಲಿ ನವಗ್ರಹಗಳ ಸ್ಥಾನಮಾನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಕಾಲಕಾಲಗಳಲ್ಲಿ ಯಾವ ಯಾವ ದಶಾಭುಕ್ತಿಗಳು ಜಾತಕರಿಗೆ ನಡೆದು ಬರುತ್ತವೆ ಮತ್ತು ಇಂತಹ ದಶಾಭುಕ್ತಿಗಳ ಕಾಲದಲ್ಲಿ ಶುಭಾಶುಭ ಫಲಗಳು ಯಾವ ರೀತಿಯಲ್ಲಿ ಇರುತ್ತವೆ ಎಂಬುದನ್ನು ಸುದೀರ್ಘವಾಗಿ ಚರ್ಚೆ ಮಾಡುವುದೇ ಈ ಗ್ರಂಥದ ಉದ್ದೇಶವಾಗಿದೆ. ಜನ್ಮ ನಕ್ಷತ್ರಕ್ಕನುಗುಣವಾಗಿ ಹುಟ್ಟಿದಾರಭ್ಯ ದಶಾಭುಕ್ತಿಗಳು ನಡೆದು ಬರುತ್ತವೆ.


ಅಶ್ವಿನಿ, ಮಖೆ ಮತ್ತು ಮೂಲಾ ನಕ್ಷತ್ರಗಳಲ್ಲಿ ಜನಿಸುವವರಿಗೆ ಕೇತುವಿನಿಂದ ಜೀವನ ಪ್ರಯಾಣ ಪ್ರಾರಂಭವಾಗುತ್ತದೆ.


ಭರಣಿ, ಪುಚ್ಚೆ ಮತ್ತು ಪೂರ್ವಾಷಾಡ ನಕ್ಷತ್ರಗಳಲ್ಲಿ ಹುಟ್ಟಿದವರು ಶುಕ್ರದೆಶೆಯಿಂದ ಜೀವನವನ್ನು ಪ್ರಾರಂಭಿಸುತ್ತಾರೆ.


ಕೃತ್ತಿಕಾ, ಉತ್ತರ ಫಲ್ಗುಣಿ ಮತ್ತು ಉತ್ತರಾಷಾಡ ನಕ್ಷತ್ರಗಳು ಜನ್ಮ ನಕ್ಷತ್ರವಾಗಿ ಜನಿಸಿದವರು ಸೂರ ಅಥವಾ ರವಿ ದೆಶೆಯಿಂದ ಜೀವನವನ್ನು ಪ್ರಾರಂಭಿಸುತ್ತಾರೆ.


ರೋಹಿಣಿ, ಹಸ್ತ ಮತ್ತು ಶ್ರವಣ ಜನುಮ ನಕ್ಷತ್ರವಾದ ಪಕ್ಷದಲ್ಲಿ ಚಂದ್ರನ ದೆಶೆಯಿಂದ ಪ್ರಾರಂಭವಾಗುತ್ತದೆ.


ಮೃಗಶಿರಾ, ಚಿತ್ತೆ ಮತ್ತು ಧನಿಷ್ಠ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜನ ದೆಶ ಆರಂಭವಾಗುತ್ತದೆ.



ಜ್ಯೋತಿಷ್ಯ ಸೌರಭ / Jyothishya sourabha
Buy Now


ಆರಿದ್ರಾ, ಸ್ವಾತಿ ಮತ್ತು ಶತಭಿಷಾ ನಕ್ಷತ್ರಗಳು ರಾಹುವಿನ ನಕ್ಷತ್ರಗಳು. ಈ ಜನ್ಮ ನಕ್ಷತ್ರಗಳಿದ್ದರೆ ರಾಹುವಿನ ದೆಶೆ ಹುಟ್ಟಿದ ಕಾಲದಲ್ಲಿ ಇರುವುದು.


ಪುನಸು, ವಿಶಾಖಾ ಮತ್ತು ಪೂರಾಭದ್ರ ನಕ್ಷತ್ರಗಳ ಅಧಿಪತಿ ಗುರು. ಈ ನಕ್ಷತ್ರಗಳಲ್ಲಿ ಜನಿಸಿರುವರಿಗೆ ಗುರುವಿನ ಬೆಲೆಯಿಂದ ಪ್ರಾರಂಭವಾಗುತ್ತದೆ.


ಪುಷ್ಯ, ಅನೂರಾಧ ಮತ್ತು ಉತ್ತಾರಾಭಾದ - ಈ ನಕ್ಷತ್ರಗಳು ಶನಿ ನಕ್ಷತ್ರಗಳು, ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಶನಿ ದೆಶೆಯಿಂದ ಪ್ರಾರಂಭವಾಗುತ್ತದೆ.


ಆಶ್ಲೇಷ, ಜೇಷ್ಠಾ ಮತ್ತು ರೇವತಿ ನಕ್ಷತ್ರಗಳ ಅಧಿಪತಿ ಬುಧ. ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಬುಧನ ದೆಶೆಯಿಂದ ಜೀವನ ಆರಂಭವಾಗುತ್ತದೆ.


ಈ ಮೇಲೆ ಹೇಳಿದ ದಶಾಭುಕ್ತಿಗಳ ಕ್ರಮವನ್ನು "ಪರಾಚರ" ಮಹರ್ಷಿಗಳು ಸೃಷ್ಟಿಸಿದ್ದು ಈ ವಿಧಾನವನ್ನು "ಉಡುದಶಾ ವಿವರಣೆ" ಎಂದೂ ಸಹ ಕರೆಯಲಾಗಿದೆ. ಉಡುದಣಾ ಕ್ರಮವೆಂದರೆ, ರವಿ->ಚಂದ್ರ->ಕುಜ-ರಾಹು->ಗುರು->ಚನಿ>ಬುಧ- ಕೇತು-ಶುಕ್ರ ಗ್ರಹ ದೆಲೆಗಳಾಗಿರುತ್ತವೆ. ನವಗ್ರಹಗಳ ದಶಾಅವಧಿಗಳು ಈ ರೀತಿಯಲ್ಲಿರುತ್ತವೆ. ರವಿ-6 ವರ್ಷಗಳು, ಚಂದ್ರ - 10 ವರ್ಷಗಳು, ಕುಜ 7 ವರ್ಷಗಳು, ರಾಹು - 18 ವರ್ಷಗಳು, ಗುರು - 18 ವರ್ಷಗಳು, ಶನಿ 10 ವರ್ಷಗಳು, ಬುಧ-17 ವರ್ಷಗಳು, ಕೇತು 7 ವರ್ಷಗಳು ಮತ್ತು ಶುಕ್ರ-20 ವರ್ಷಗಳು ಆಗಿರುತ್ತವೆ.


ಮನುಷ್ಯನ ಜೀವಿತಾವಧಿಯಲ್ಲಿ ಎಲ್ಲಾ ನವಗ್ರಹಗಳ ದೆಲೆಗಳು ಪೂರ್ಣವಾಗಿ ನಡೆಯುವುದಿಲ್ಲ. ಆ ಗ್ರಹಗಳ ದೆಲೆಗಳ ಪೂರ್ಣ ಫಲ ನಡೆದು ಬಂದಿದ್ದ ಪಕ್ಷದಲ್ಲೂ ಸಹ ದೀರ್ಘಾಯುದ್ಯೋಗವೆಂದೇ ಹೇಳಬೇಕು. 7ನೇ ಮತ್ತು 8ನೇ ಬೆಲೆಗಳು ಮಾರಕವಾಗಿದ್ದು ಈ ದಶಾಕಾಲಲ್ಲಿ ಸಾವು ಸಂಭವಿಸುತ್ತದೆ.


ಜ್ಯೋತಿಷ್ಯ ಸೌರಭ / Jyothishya sourabha
Buy Now


ಜಾತಕಗಳಲ್ಲಿ ಎಲ್ಲಾ ನವಗ್ರಹಗಳು ಶುಭವಾಗಿರುವುದಿಲ್ಲ. ಹಾಗಾಗಿ ಎಲ್ಲಾ ದೆಲೆಗಳು ಶುಭ ಫಲಗಳನ್ನು ನೀಡುವುದಿಲ್ಲ. ಅಶುಭ ದಶಾಭುಕ್ತಿಗಳಲ್ಲಿ ತೊಂದರೆಗಳು, ದುಃಖ-ದುಮ್ಮಾನಗಳು, ಕಷ್ಟಕರವಾದ ಜೀವನಗಳನ್ನು ಎದುರಿಸಲೇ ಬೇಕಾಗುತ್ತದೆ. ವಿದ್ಯಾರ್ಜನೆ, ವೃತ್ತಿ ಜೀವನ ಲಭ್ಯತೆ - ವೃತ್ತಿಯಿಂದ ಹಣ ಸಂಪಾದನೆ ಇವುಗಳೆಲ್ಲಾ ಶುಭಾಶುಭ ಗ್ರಹಗಳ ದಶಾಭುಕ್ತಿಗಳ ಹಿಡಿತದಲ್ಲೇ ಇರುತ್ತವೆ. ಯೋಗಕಾರಕ ಗ್ರಹಗಳ ದಶಾಭುಕ್ತಿಗಳು ಸರಿಯಾದ ಜೀವಿತ ಕಾಲಗಳಲ್ಲಿ ಅಂದರೆ ಬಾಲ್ಯ-ಯೌವನ-ಮಧ್ಯ ವಯಸ್ಸು-ವಾರ್ಧಕ್ಯ-ವೃದ್ಧಾಪ್ಯ ಮತ್ತು ವಾನಪ್ರಸ್ಥಾಶ್ರಮಗಳಲ್ಲಿ ಬಂದಿದ್ದ ಪಕ್ಷಗಳಲ್ಲಿ ಅವರಿಗೆ ವಿದ್ಯಾಲಾಭ-ಹಣ ಸಂಪಾದನೆ-ಗೃಹಲಾಭ-ವಾಹನ ಲಾಭ-ಅಷ್ಟೆಶ್ಚದ್ಯಗಳ ಲಾಭ. ಮನೆಯಲ್ಲಿ ಮಂಗಳಕರ ಸಮಾರಂಭಗಳು ಪುತ್ರ ಸಂತಾನ ಪ್ರಾಪ್ತಿ, ಭೂ ನಿವೇಶನಗಳ ಲಾಭಗಳುಂಟಾಗುತ್ತವೆ. ಆದರೆ ಈ ದಶಾಭುಕ್ತಿಗಳಲ್ಲಿ ಶುಭಾಶುಭಪಲಗಳ ಮಿಶ್ರಫಲಗಳೇ ನಡೆದು ಬಂದಿರುತ್ತವೆ.


ಮೇಲೆ ಸೂಚಿಸಿದ ದಶಾಭುಕ್ತಿಗಳ ಫಲಗಳು ಯಾವ ರೀತಿಯಲ್ಲಿರುತ್ತವೆ ಎಂಬುದನ್ನು ಸುದೀರ್ಘವಾಗಿ ವಿಶ್ಲೇಷಣೆ ಮಾಡಿ ಮುಂದಿನ ಅಧ್ಯಾಯಗಳಲ್ಲಿ ಹಂತ ಹಂತವಾಗಿ ವಿವರಿಸಲಾಗುವುದು. ಸಹೃದಯ ಓದುಗರು ದಶಾಭುಕ್ತಿಗಳ ಫಲಗಳನ್ನು ತಿಳಿದುಕೊಂಡು ಈ ಗ್ರಂಥದಲ್ಲಿ ಹೇಳಿರುವ ಉದಾತ್ತವಾದ ವಿವರಣೆಗಳನ್ನು ಮನನ ಮಾಡುತ್ತಾರೆಂದು ಮತ್ತು ಇದರಲ್ಲಿರುವ ಗುಣಾವಗುಣಗಳನ್ನು ತುಲನೆಮಾಡಿ ಸದ್ವಿಚಾರಗಳನ್ನು ಸ್ವೀಕರಿಸುತ್ತಾರೆಂದು ನಂಬಿರುತ್ತೇನೆ. ಜ್ಯೋತಿಷ್ಯಶಾಸ್ತ್ರವನ್ನು ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಭಗವಂತನು ವಿದ್ಯಾಕೃಪೆಯನ್ನುಂಟುಮಾಡಲಿ.


For more Astrology books visit our Bookstore



 
 
 

Comments


Groups

STAY CONNECTED

Get the latest news & updates

ganapapustaka@gmail.com
Tel. +91 9483855488

© 2025 by GANAPA PUSTAKA.

bottom of page