ರಾಶಿ ದರ್ಶನ/ Raashi Darshana
- Ganapa Pustaka
- Apr 3, 2024
- 1 min read
Updated: Apr 17, 2024

ಲೇಖಕರು: *ಡಾ|| ಅನಸೂಯ ಎಸ್. ರಾಜೀವ್*
ಭಾಷೆ: *ಕನ್ನಡ*
*ರಾಶಿ ದರ್ಶನ* ರಾಶಿ ಹಾಗೂ ಲಗ್ನವನ್ನು ಕುರಿತ ಹೊತ್ತಿಗೆ. ಈ ಪುಸ್ತಕದಲ್ಲಿ ದ್ವಾದಶ ರಾಶಿಗಳ ಆಧ್ಯಾತ್ಮಿಕ ಹಿನ್ನೆಲೆಯನ್ನು, ವಿಶೇಷತೆಯನ್ನು ಮತ್ತು ಕಾರಕತ್ವಗಳನ್ನೂ ವಿಸ್ತೃತವಾಗಿ ನೀಡಲಾಗಿದೆ. ಅದರ ಜೊತೆಗೆ ದ್ವಾದಶ ಲಗ್ನಗಳ ಮೇಲೆ ರಾಶಿಕಾರಕತ್ವಗಳ ಪ್ರಭಾವವನ್ನು ವಿವಿಧ ದೃಷ್ಟಿಕೋನಗಳಿಂದ ಉದಾಹರಣೆ ಜಾತಕಗಳ ಮೂಲಕ ವಿವರಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಕುಂಡಲಿ ಎನ್ನುವುದು ಭದ್ರ ತಳಪಾಯವಿದ್ದಂತೆ. ರಾಶಿ ಕುಂಡಲಿಯಲ್ಲಿನ ಅನೇಕ ನಿಗೂಢ ಕಾರಕತ್ವಗಳನ್ನು ಮತ್ತು ಅವುಗಳ ಉಪಯುಕ್ತತೆಗಳನ್ನು, ಜಾತಕ ಫಲ ಜ್ಯೋತಿಷ್ಯದಲ್ಲಿ ಅವುಗಳ ಪಾತ್ರವನ್ನು ಪರಿಚಯಿಸುವ ಮಹದಾಶೆಯೇ ಈ ಪುಸ್ತಕ ಹೊರಬರಲು ಕಾರಣವಾಗಿದೆ.
*ರಾಶಿ ದರ್ಶನ*ವು ಜ್ಯೋತಿಷ್ಯ ಕಲಿಯುವವರಿಗೆ ಅನುಕೂಲವಾಗುವಂತಹ ಹೊತ್ತಿಗೆ. ಇದರಲ್ಲಿ ಲೇಖಕರು ರಾಶಿಗಳ ಸಮಗ್ರ ಪರಿಚಯವನ್ನು ಮಾಡಿರುತ್ತಾರೆ. ಜ್ಯೋತಿಷ್ಯಸಕ್ತರಿಗೆ ಈ ಗ್ರಂಥ ಉಪಯೋಗವಾಗುವುದರಲ್ಲಿ ಸಂಶಯವಿಲ್ಲ.
What do you feel about this Book
0%Great
0%Good
0%Average
0%Not read yet...





Comments